
ಚಾಣಕ್ಯ ನಿಜಾರ್ಥದಲ್ಲಿ ಬ್ರಾಹ್ಮಣ ಕಾರಣ ಆತ ಸದಾ ರಾಷ್ಟ್ರದ ಒಳಿತಿಗಾಗಿ ಯೋಚನಾಮಗ್ನ, ಆತ ಗುರುಕುಲದಲ್ಲಿ ಆಚಾರ್ಯನಾಗಿದ್ದರ್ರಿಂದ ಅವನಿಗೆ ಎಲ್ಲರೂ ಸಮಾನರೇ. ರಾಷ್ಟ್ರಭಕ್ತಿ ರಕ್ತದ ಕಣಕಣದಲ್ಲಿ ಹರಡಿಕೊಂಡಿದ್ದರಿಂದ ರಾಷ್ಟ್ರದ ಘನತೆ-ಗೌರವಗಳೊಂದಿಗೆ ಯಾವ ರಾಜಿಗೂ ಆತ ಸಿದ್ದನಿರಲಿಲ್ಲ.ಅದಕ್ಕೆ ಆತ ಕಠಿಣ ಹೃದಯಿ ಅಂತ ಅನೇಕರಿಗೆ ಅನ್ನಿಸೋದು.ಇಷ್ಟಕ್ಕೂ ಚಾಣಕ್ಯದ್ದೆಂದೇ ಹೇಳಲಾಗುವ ಮಾತೊಂದಿದೆ
ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀ ತ್ಯಜೇತ್ ||