Monday, July 11, 2016

ಚಾಣಕ್ಯ ನೀತಿ


ಚಾಣಕ್ಯ ನಿಜಾರ್ಥದಲ್ಲಿ ಬ್ರಾಹ್ಮಣ ಕಾರಣ ಆತ ಸದಾ ರಾಷ್ಟ್ರದ ಒಳಿತಿಗಾಗಿ ಯೋಚನಾಮಗ್ನ, ಆತ ಗುರುಕುಲದಲ್ಲಿ ಆಚಾರ್ಯನಾಗಿದ್ದರ್ರಿಂದ ಅವನಿಗೆ ಎಲ್ಲರೂ ಸಮಾನರೇ. ರಾಷ್ಟ್ರಭಕ್ತಿ ರಕ್ತದ ಕಣಕಣದಲ್ಲಿ ಹರಡಿಕೊಂಡಿದ್ದರಿಂದ ರಾಷ್ಟ್ರದ ಘನತೆ-ಗೌರವಗಳೊಂದಿಗೆ ಯಾವ ರಾಜಿಗೂ ಆತ ಸಿದ್ದನಿರಲಿಲ್ಲ.ಅದಕ್ಕೆ ಆತ ಕಠಿಣ ಹೃದಯಿ ಅಂತ ಅನೇಕರಿಗೆ ಅನ್ನಿಸೋದು.ಇಷ್ಟಕ್ಕೂ ಚಾಣಕ್ಯದ್ದೆಂದೇ ಹೇಳಲಾಗುವ ಮಾತೊಂದಿದೆ

ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀ ತ್ಯಜೇತ್ ||

Sunday, July 10, 2016

148ನೆಯ ಅಧ್ಯಾಯ ಪ್ರಲಂಭನದಲ್ಲಿ ಔಷಧಿ ಮತ್ತು ಮಂತ್ರಗಳ ಪ್ರಯೋಗ

(ರಾತ್ರಿ ಮತ್ತು ಕತ್ತಲೆಯಲ್ಲಿ ಪದಾರ್ಥಗಳು ಕಾಣಿಸುವ ಯೋಗಗಳು)
ಬೆಕ್ಕು,ಒಂಟೆ ,ತೋಳ,ಹಂದಿ ,ನಾಯಿ ,ಹುಲಿ ,ವಾಗಲೀ ಎಂಬ ಹಕ್ಕಿ ,ವಿಷ್ಕಿರ ,ಕಾಗೆ ,ಗೂಬೆ ಮತ್ತು  ಇತರ ರಾತ್ರಿ ಸಂಚಾರಿಗಳಾದ ಪ್ರಾಣಿಗಳ ಬಲದ ಅಥವಾ ಎಡದ  ಕಣ್ಣುಗಳನ್ನು ತೆಗೆದುಕೊಂಡು, ಎರಡು  ವಿಧವಾಗಿ  ಚೂರ್ಣ ಮಾಡಬೇಕು . ಅನಂತರ  ಬಲಕಣ್ಣಿನ  ಚೂರ್ಣವನ್ನು  ಎಡಕಣ್ಣಿನ ಚೂರ್ಣವನ್ನು ಬಲಕಣ್ಣಿಗೂ ಹಚ್ಚಿಕೊಂಡರೆ,ರಾತ್ರಿಯಲ್ಲಿ  ಮತ್ತು ಕತ್ತಲೆಯಲ್ಲಿ ವಸ್ತುಗಳನ್ನು ನೋಡುವನು .
ಏಕಾಮ್ಲಕಂ ವರಾಹಾಕ್ಷಿ ಖದ್ಯೋತಃ ಕಾಲಶಾರವಾ |
ಏತೇನಾಭ್ಯಕ್ತನನೋ ರಾತ್ರೌ ರೂಪಾಣಿ ಪಶ್ಯತಿ ||೩೫೧||
ನಿಂಬೆಯ  ಹಣ್ಣು,  ಹಂದಿಯ ಕಣ್ಣು ,ಮಿಂಚುಹುಳು ,ಕಾಲಶಾರಿವಾ ಎಂಬ ಔಷಧಿ, ಇವುಗಳ ಅಂಜನವನ್ನು ಕಣ್ಣಿಗೆ ಲೇಪಿಸಿಕೊಂಡರೆ ರಾತ್ರಿಹೊತ್ತು  ರೂಪಗಳನ್ನು ನೋಡುವನು.

Monday, September 15, 2014

ಕೌಟಿಲೀಯ ಅರ್ಥಶಾಸ್ತ್ರ

೧ .ಮೂಲ ಗ್ರಂಥ ಮತ್ತು ಕರ್ತೃ ಪ್ರಶಸ್ತಿ

ವಂಶೇ   ವಿಶಾಲವಂಶ್ವಾನಾಂ  ಋಷೀಣಾಮಿವ  ಭೂಯಸಾಮ್  
ಅಪ್ರತಿಗ್ರಾಹಕಾಣಾಂ  ಯೋ   ಬಭೂತ  ಭುವಿ   ವಿಶ್ರುತಃ ||೧||

ಜಾತವೇದಾ  ಇವಾರ್ಚಿಷ್ಮಾನ್   ವೇದಾನ್   ವೇದವಿದಾಂವರಃ |
ಯೋsಧೀತವಾನ್    ಸುಚತುರಃ   ಚತುರೋಪ್ಯೇಕವೇದವತ್ ||೨||

ಯಸ್ಯಾಭಿಚಾರವಜ್ರೇಣ   ವಜ್ರಜ್ವಲನತೇಜಸಃ   |
ಪಪಾತ   ಮೂಲತಃ  ಶ್ರೀಮಾನ್   ಸುಪರ್ವ  ನಂದಪರ್ವತಃ ||೩||

ಏಕಾಕೀ  ಮಂತ್ರಶಕ್ತ್ಯಾ  ಯಃ   ಶಕ್ತ್ಯಾ ಶಕ್ತಿಧರೋಪಮಃ
ಅಜಹಾರ   ನೃಚಂದ್ರಾಯ   ಚಂದ್ರಗುಪ್ತಾಯ  ಮೇದಿನೀಮ್ ||೪||

ನೀತಿಶಾಸ್ತ್ರಾಮೃತಂ   ಧೀಮಾನ್  ಅರ್ಥಶಾಸ್ತ್ರ  ಮಹೋದಧೇಃ |
ಸಮದ್ದಧ್ರೇ  ನಮಸ್ತಸ್ಮೈ  ವಿಷ್ಣುಗುಪ್ತಾಯ  ವೇಧಸೇ ||೫||

(ಲೋಕದಲ್ಲಿ  ಪ್ರಸಿದ್ಧನಾದ  ಯಾರು  ವಿಶಾಲವಾದ   ವಂಶವುಳ್ಳ  ಶ್ರೇಷ್ಠರಾದ  ಋಷಿಗಳಂತಿರುವ, ದಾನವನ್ನು  ಸ್ವೀಕರಿಸದವರ  ವಂಶದಲ್ಲಿ   ಜನಿಸಿದ್ದನೋ , ಅತ್ಯಂತ   ನಿಪುಣನಾದ   ಯಾರು  (ವೇದಗಳೊಡನೆ    ಜನಿಸಿದ )ಅಗ್ನಿಯಂತೆ  ತೇಜಸ್ವಿಯಾಗಿ   ಪ್ರಜ್ವಲಿಸುತ್ತಿದ್ದು   ವೇದಾರ್ಥ  ತಿಳಿದವರಲ್ಲಿ   ಶ್ರೇಷ್ಠನಾಗಿ   ನಾಲ್ಕು  ವೇದಗಳನ್ನೂ    ಒಂದೇ  ವೇದದಂತೆ  ಅಧ್ಯಯನ  ಮಾಡಿದನೋ ,

Sunday, September 14, 2014

Chanakya's ARTHA SHASTRA

Chanakya's ARTHA SHASTRA deals   with   a vast   variety   of    subjects  and     covers   almost  every    aspect  of   the   theroy   and    practice of  government    it    discusses the     duties   of  the   king   of  his   ministere  and    councillors  of  concil  meetinges  of   departments  of   government   of   diplomacy  of   war and    peace it   gives    details of   the    vast    army  which   chandragupta    had  consisting   of  infantry   cavalry    chariots   and   eleohants and    yet  chanakya  suggests  that    more    numbers  do     not count  for   much ;   without  discipline     and  proper  leadership   they  may    become  a burden     .defence  and   fortifications and   proper leadership  they   may    become   a burden  .defence and    fortifications  are also    dealt  with .
Coming Soon in Kannada